Mallamma Nudi

ಗುರುವಂದನಾ-ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಸಿದ್ದಲಿಂಗ ಶ್ರೀ ಬದುಕಿಗೆ ಬೆಳಕು ನೀಡಿದ ಗುರುವಿಗೆ ಕೃತಜ್ಞರಾಗಿರಿ

23rd February 2025

News image

 ತಾಳಿಕೋಟಿ: ನಿಮ್ಮನ್ನು ತಿದ್ದಿ ಸಂಸ್ಕಾರವಂತರನ್ನಾಗಿ ಮಾಡಿ ಜ್ಞಾನದ ಬೆಳಕಿನಿಂದ ಬದುಕಿನ ಉದ್ದೇಶವನ್ನು ತಿಳಿಸಿಕೊಟ್ಟ ನಿಮ್ಮ ಗುರುಗಳನ್ನು ಎಂದೂ ಮರೆಯಬೇಡಿ ಅವರಿಗೆ ಕೃತಜ್ಞರಾಗಿರಿ ಎಂದು ಖಾಸ್ಗತೇಶ್ವರ ಮಠದ ಪರಮ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಎಸ್ ಕೆ ಪ್ರೌಢ ಶಾಲಾ ಆವರಣದಲ್ಲಿ 1993-94ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ರವಿವಾರ ಹಮ್ಮಿಕೊಂಡ ಗುರು ವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಈ ಜೀವನ ಕ್ಷಣಿಕವಾದದ್ದು ಯಾವಾಗ ಮುಗಿಯುತ್ತದೆಯೋ ಗೊತ್ತಿಲ್ಲ ಆದರೆ ಬದುಕಿರುವಷ್ಟು ದಿನ ಸಂತೋಷದಿಂದ ಇದ್ದು ಇನ್ನೊಬ್ಬರ ನೋವಿಗೆ ಸ್ಪಂದಿಸುವ ಕಾರ್ಯ ಮಾಡಿ, ನೀವು ಕಲಿತ ಸಂಸ್ಥೆಯಲ್ಲಿ ಕಳೆದ ವಿದ್ಯಾರ್ಥಿ ಜೀವನವನ್ನು ಸ್ಮರಿಸಲು 30 ವರ್ಷಗಳ ನಂತರ ಒಂದಾಗಿದ್ದೀರಿ ಈ ಕ್ಷಣವನ್ನು ಸುಂದರವಾಗಿಸಿಕೊಳ್ಳಿ ಶ್ರೀ ಖಾಸ್ಗತರ ಕೃಪಾಶೀರ್ವಾದ ನಿಮ್ಮ ಮೇಲಿರಲಿ ಎಂದರು. ವಿವಿ ಸಂಘದ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ ಇದೊಂದು ಸಾರ್ಥಕ ಕಾರ್ಯಕ್ರಮ ನಿಮಗೆ ವಿದ್ಯೆ ನೀಡಿದ ಗುರುವನ್ನು ಗೌರವಿಸುವ ಕಾರ್ಯವನ್ನು ಮಾಡಿದ್ದೀರಿ, ಇದೇ ರೀತಿ ನಿಮ್ಮ ಮುಂದಿನ ಬದುಕಿನಲ್ಲೂ ಎಲ್ಲರೂ ಒಂದಾಗಿ ಪ್ರೀತಿಯಿಂದ ಇರಲು ಪ್ರಯತ್ನಿಸಿ ಎಂದರು. ಶಿಕ್ಷಕರಾದ ಪಿ.ಬಿ.ಬಂಟನೂರ,ಡಾ. ಅನೀಲಕುಮಾರ್ ಇರಾಜ್, ಶ್ರೀಮತಿ ಬಿ.ಆರ್.ಬಿರಾದಾರ ಮಾತನಾಡಿದರು. ಅದ್ಭುತ ಮತ್ತು 1993-94 ನೇ ಸಾಲಿನ ವಿದ್ಯಾರ್ಥಿಗಳಾದ ಶ್ರೀಮತಿ ಶಕುಂತಲಾ ಹಾದಿಮನಿ,ರಾಜು ವಿಜಾಪುರ, ಪ್ರಕಾಶ್ ಕಟ್ಟಿಮನಿ, ಸುಧಾ ಮಹೀಂದ್ರಕರ, ನಾಗರತ್ನ ದರ್ಜಿ ಹಾಗೂ ಕೇಶವ ಹಜೇರಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ಉಪಸ್ಥಿತರಿದ್ದ ಗುರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಕಲಿದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿ ಮಿತ್ರರಿಗೆ ಒಂದು ನಿಮಿಷದ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವೇದಿಕೆಯಲ್ಲಿ ನಿವೃತ್ತ ನ್ಯಾಯಾಧೀಶ ಎಸ್ ಎಮ್ ಜಾಲವಾದಿ, ನಿವೃತ್ತ ಶಿಕ್ಷಕರಾದ ಬಿ.ಬಿ. ಕೊಂಗಂಡಿ, ಆರ್ ಆರ್ ಬಡಿಗೇರ, ಡಿವಿ ಬಡಿಗೇರ, ಜೀವಿ ಕುಲಕರ್ಣಿ, ಎಂ.ಎಸ್. ಬಿರಾದಾರ, ಎಸ್ ಸಿ ಉಪ್ಪಾರ,ಎಸ್ ಬಿ ಹೇಳವಾರ, ಸಿ.ವಿ. ಮೆಣಸಿನಕಾಯಿ, ಶ್ರೀಮತಿ ಆರ್ ಕೆ ಭುಸಾರೆ, ಎಂಎ ಬಾಗೇವಾಡಿ,ಆರ್ ಬಿ ದಾನಿ,ಎಸ್.ವಿ. ಬೆನಕಟ್ಟಿ,ವಾಯ್.ಎಸ್.ನಾದ, ಮುಖ್ಯ ಶಿಕ್ಷಕಿ ಶ್ರೀಮತಿ ಬಿಟಿ ಸಜ್ಜನ, ದೈಹಿಕ ಶಿಕ್ಷಕಿ ಶ್ರೀಮತಿ ಎಂ ಆರ್ ಕುಲಕರ್ಣಿ, ಶಿಕ್ಷಕ ಎ. ಎಚ್.ಹೂಗಾರ, ಹಾಗೂ ಬೋಧಕೇತರ ಸಿಬ್ಬಂದಿಗಳು, 1993-94 ನೇ ಸಾಲಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಶ್ರೀಮತಿ ಮಂಜುಳಾ ನಿಡಗುಂದಿ ಯಾವ ಸಂಗಡಿಗರು ಪ್ರಾರ್ಥಿಸಿದರು. ಮಹಾಂತೇಶ ಮುರಾಳ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಆರ್ ಎಸ್ ವಾಲಿಕಾರ ನಿರೂಪಿಸಿ ವಂದಿಸಿದರು.

ಸಾರಾಂಶ

undefined

Comments
Show comments
ಸಂಬಂಧಿತ ಲೇಖನಗಳು
ಸುದಿನ
11th March 2025

ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ.  ಮುಸಲ್ಮಾರಿ  ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ. 

ಸುದಿನ
11th March 2025

ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ.  ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.

ಸುದಿನ
3rd March 2025

ಕುಡಿವ ನೀರಿಗಾಗಿ ರಹವಾಸಿಗಳಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಾವಲಗಟ್ಟಿ ಗೆ ಮನವಿ

ಮಲ್ಲಮ್ಮ ನುಡಿ ವಾರ್ತೆ
2nd March 2025

ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ‍್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ

ಮಲ್ಲಮ್ಮ ನುಡಿ ವಾರ್ತೆ
1st March 2025

ರಾಜ್ಯದ ಅಭಿವೃದ್ಧಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ-ಸಚಿವ ಈಶ್ವರ ಖಂಡ್ರೆ

ಮಲ್ಲಮ್ಮ ನುಡಿ ವಾರ್ತೆ
23rd February 2025

'ನೀರು, ಮಣ್ಣು ದೇವರು ಕೊಟ್ಟ ಕಾಣಿಕೆ ಅದು ಸಂರಕ್ಷಣೆ ಮಾಡಬೇಕು' ಶಿವಶೇಖರ ಸ್ವಾಮಿ ಜಲಾನಯನ ಯಾತ್ರೆ

ಪ್ರಕಾಶಕರು
Ramesh Reddy